ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಕಾರ್ಯಕ್ರಮಕ್ಕೆ ಮಗಳು ಸಿತಾರಾ ಜೊತೆ ಮಹೇಶ್ ಬಾಬು ಗ್ರ್ಯಾಂಡ್ ಎಂಟ್ರಿ

ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಕಾರ್ಯಕ್ರಮಕ್ಕೆ ಮಗಳು ಸಿತಾರಾ ಜೊತೆ ಮಹೇಶ್ ಬಾಬು ಗ್ರ್ಯಾಂಡ್ ಎಂಟ್ರಿ

ಮಹೇಶ್ ಬಾಬು- ಸಿತಾರಾ: ಸೂಪರ್ಸ್ಟಾರ್ ಮಹೇಶ್ ಬಾಬು ಅವರು ತಮ್ಮ ಮಗಳು ಸಿತಾರಾ ಅವರೊಂದಿಗೆ ಜೀ ತೆಲುಗಿನಲ್ಲಿ ಪ್ರಸಾರವಾಗಲಿರುವ

'ಡ್ಯಾನ್ಸ್ ಇಂಡಿಯಾ ಡ್ಯಾನ್ಸ್' ಪ್ರೀಮಿಯಂ ರಿಯಾಲಿಟಿ ಶೋನಲ್ಲಿ ಭಾಗವಹಿಸಿದರು. ಮಗಳ ಕೈ ಹಿಡಿದು ಡ್ಯಾನ್ಸ್ ಶೋಗೆ ಕರೆದು ಕೊಂಡು ಹೋಗಿದ್ದಾರೆ

ಸಿನಿಮಾ ಬಿಟ್ಟರೆ ಹೊರಗಡೆ ಅಪರೂಪಕ್ಕೆ ಕಾಣಿಸಿಕೊಳ್ಳುವ ಸೂಪರ್ ಸ್ಟಾರ್ ಮಹೇಶ್ ಬಾಬು ಟಿವಿ ಶೋ ಒಂದಕ್ಕೆ ಮಗಳನ್ನು ಕರೆದೊಯ್ದಿದ್ದಾರೆ.

ಜೀ ತೆಲುಗಿನಲ್ಲಿ ಪ್ರಸಾರವಾಗಲಿರುವ 'ಡ್ಯಾನ್ಸ್ ಇಂಡಿಯಾ ಡ್ಯಾನ್ಸ್' ಎಂಬ ಪ್ರೀಮಿಯಂ ರಿಯಾಲಿಟಿ ಶೋಗೆ ಸೂಪರ್ಸ್ಟಾರ್ ಮಹೇಶ್ ಬಾಬು ಅವರು ತಮ್ಮ ಮಗಳು ಸಿತಾರಾ ಅವರೊಂದಿಗೆ ಭಾಗವಹಿಸಿದ್ದರು

ಹಾಗೆ ಮಗಳ ಜೊತೆ ನಡೆದುಕೊಂಡು ಹೋಗುತ್ತಿದ್ದರೆ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ಗಾಗಿ ಸಿತಾರ ಜೊತೆ ಮಹೇಶ್ ಬಾಬು ವೇದಿಕೆಗೆ ಬರುತ್ತಿರುವುದು ಸೂಪರ್ಸ್ಟಾರ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ನನಗೆ ಗೊತ್ತು ಡ್ಯಾನ್ಸ್ ಅನ್ನೋದೇ ಒಂದು ಸಂಭ್ರಮ. ನನ್ನ ಮಗಳ ಜೊತೆ ಈ ಕಾರ್ಯಕ್ರಮಕ್ಕೆ ಬಂದಿರುವುದು ನಿಜಕ್ಕೂ ಖುಷಿ ತಂದಿದೆ ಎಂದು ಮಹೇಶ್ ಬಾಬು ವೇದಿಕೆಯಲ್ಲಿ ಹೇಳಿದರು.