Heart touching friendship kannada quotes – 2022 friendship day quotes :
search quarries includes :
ಸ್ನೇಹವೆಂಬುದು ಶುಭ್ರವಾದ ನೀಲಿ ಅಗಸದಂತೆ ಹರಿಯುವ ತಿಳಿ ನೀರಿನ ಕಲರವದಂತೆ ಇಲ್ಲಿ ಕೊಂಕು ಬಿಂಕಗಳಿಲ್ಲ . ಜಾತಿ ಮತಗಳಿಲ್ಲ ನಾನು ತಾನು ಎಂಬುದಿಲ್ಲ. ನವ ಚೇತನ ನಿತ್ಯ ನೂತನ ಅನುದಿನ ವಸಂತಮಯ ಈ ಗೆಳೆತನ. ಈ ಸ್ನೇಹಕ್ಕೆ ಎಲ್ಲೇ ಇಲ್ಲ ಎರಡು ಜೀವಗಳ ಆತ್ಮ ಸಂಬಂಧವಿದು ಎಲ್ಲೋ ಇರುವ ಒಂದು ಜೀವ ಇನ್ನೆಲ್ಲೋ ಇರುವ ಇನ್ನೊ೦ದು ಜೀವದ ನಡುವೆ ಬೆಸೆಯುವ ಆತ್ಮ ಸಂಯಮವಿದು ಸುವರ್ಣ ಸೇತುವೆಯಿದು. ನೋವು ನಲಿವಿಗೂ ಸ್ಪಂದಿಸುತ ದಿಕ್ಕು ತಪ್ಪಿದಾಗ ದಾರಿ ತೋರುತ ನಿನ್ನ ಏಳ್ಗೆಯೇ ನನ್ನ ಏಳ್ಗೆ ಎಂಬುದೇ ನಿಜವಾದ ಸ್ನೇಹ ಈ ಸ್ನೇಹ ಅಮೃತ ಜಲದಂತೆ ಸದಾ ಜೀವಂತಧಾರೆ.
ಗೆಳೆತಿ…..ನೀ ಕೇಳಿದೆ…ನನ್ನ ಸ್ನೇಹ ಏಕೆ ನಿನಗೆಂದು….?? ಉತ್ತರ ಇರಲಿಲ್ಲ…ಹೌದು ನಾ ಯಾರು…? ನಾ ನಿನಗೇನೂ..ಏನೂ ಅಲ್ಲವೇ…? ಮತ್ತೇಕೆ….ನಿನ್ನ ಸ್ನೇಹ ನನಗೆ..ಯೋಚಿಸಿದೆ…ಉತ್ತರ ಹುಡುಕಿದೆ …? ಕೇಳು…..ನನಗೆ ನೀನೊಬ್ಬಳು ಅಮ್ಮನಂತೆ ಅಕ್ಕರೆ ತೋರುವವಳು …!! ಅಪ್ಪನಂತೆ…ಪೋಷಿಸುವವಳು….ಅಕ್ಕಳಂತೆ….ಧೈರ್ಯ ನೀಡುವವಳು….!! ಮಗುವಿನಂತೆ….ಮುದ್ಧಿಸುವವಳು….ಪ್ರಿಯತಮೆಯಂತೆ ಪ್ರೀತಿಸುವವಳು….!! ಗೆಳೆತಿ…..ತಿಳಿಯಿತೇ ಕಾರಣ…ನಿನ್ನ ಸ್ನೇಹ ಏಕೆ ನನಗೆಂದು.
ಲವರ್ಸ್ ಒಂದು ಎಳನೀರಿಗೆ 2 ಸ್ಟ್ರಾ ಹಾಕಿಕೊಂಡು ಕುಡಿತ್ತಾರೆ. . . ಆದರೆ… . . ನಾವು ಸ್ನೇಹಿತರು ಒಂದು ಎಳನೀರು ತಗೊಂಡ್ರೆ ಸ್ಟ್ರಾ ಯುಸ್ ಮಾಡಲ್ಲ, “ಲೋ ಮಗನೇ ಸರಿಯಾಗಿ ಅರ್ದ ಕುಡಿದು ಇನ್ನ ಅರ್ದ ನನಗೆ ಕೊಡು, ಇಲ್ಲ ಅಂದ್ರೆ ಕೊಲೆ ಮಾಡ್ತಿನಿ”.
ಪರೀಕ್ಷೆಯಲ್ಲಿ ಪಾಸ್ ಆದ್ರೆ… ಮೇಷ್ಟ್ರು: ನನ್ ಶಿಷ್ಯ ಅಲ್ವಾ, ಅಮ್ಮ: ದೇವರ ಆಶಿರ್ವಾದ, ಅಪ್ಪ: ಅವನು ನನ್ ಮಗ ಕಣೇ. ಸ್ನೇಹಿತ: ಬಾ ಮಗ ಎಣ್ಣೇ ಹೋಡಿಯೋಣ. ಆದರೆ ಪರೀಕ್ಷೆಯಲ್ಲಿ ಫೇಲ್ ಆದ್ರೆ ಮೇಷ್ಟ್ರು: ಕ್ಲಾಸಿನಲ್ಲಿ ಸರಿಯಾಗಿ ಕಲಿಯಲಿಲ್ಲ ಮುಂಡೇದು. ಅಮ್ಮ: ಬರಿ ಮೊಬೈಲ್, ಫಿಲಮ್ ಹುಚ್ಚು. ಅಪ್ಪ: ನೀನ್ ಹೆತ್ತ ಮಗ ಅಲ್ವಾ, ಸ್ನೇಹಿತ: ಬಾ ಮಗ ಎಣ್ಣೆ ಹೋಡಿಯೋಣ. That is friendship…
ಉಗುರು ಬೆಳೆದ ಸಂದರ್ಭದಲ್ಲಿ ಅದನ್ನು ಮಾತ್ರ ತೆಗೆಯುತ್ತೇವೆಯೇ ಹೊರತು ಬೆರಳನ್ನು ಅಲ್ಲ. ಅದೇ ರೀತಿ ಮನಸ್ತಾಪದ ಪ್ರಸಂಗ ಎದುರಾದಾಗ ಅಹಂಕಾರವನ್ನು ಮುರಿಯಬೇಕೇ ಹೊರತು ಮಿತ್ರತ್ವವನ್ನು ಅಲ್ಲ..
ಸ್ನೇಹದ ಮಧುರತೆಯ ಸವಿಯಲು ನನ್ನೆಲ್ಲಾ ನೋವುಗಳ ಮರೆಯಲು ನಿಮ್ಮ ಸವಿ ಸನಿಹವ ಪಡೆಯಲು ಕಾತುರದಿಂದ ಕಾಯುತಿರುವೆ ನಿಮಗಾಗಿ ನಿಮ್ಮ ಸ್ನೇಹಕ್ಕಾಗಿ
ಬಾರದಿರಲಿ ನಮ್ಮ ನಡುವೆ ಅಂತರ ಇರಲಿ ನಮ್ಮ ಸ್ನೇಹ ನಿರಂತರ, ಅಜರಾಮರ
ಸವಿ ಇರಲಿ ನುಡಿಯಲಿ ಸವಿಯೇ ಸೇತುವೆ ಗೆಳೆತನಕ್ಕೆ ನಗು ಇರಲಿ ಮೊಗದಲಿ ನಗುವೇ ದಾರಿ ಹೃದಯಕ್ಕೆ!! ಸೋಲಬೇಕು ಸ್ನೇಹಕ್ಕೆ ಸೋಲಿನಡಿಪಾಯ ಗೆಲುವು ಸೊಗಸಿರಲಿ ವದನದಿ ಸೊಗಸೇ ಹಾಸು ಸುಂದರತೆಗೆ
ಸ್ನೇಹದ ಮಧುರತೆಯ ಸವಿಯಲು ನನ್ನೆಲ್ಲಾ ನೋವುಗಳ ಮರೆಯಲು ನಿಮ್ಮ ಸವಿ ಸನಿಹವ ಪಡೆಯಲು ಕಾತುರದಿಂದ ಕಾಯುತಿರುವೆ ನಿಮಗಾಗಿ ನಿಮ್ಮ ಸ್ನೇಹಕ್ಕಾಗಿ
You may Also Like :