180 kannada ogatugalu with answer : ಕನ್ನಡ ಒಗಟುಗಳು

  ಕನ್ನಡ ಒಗಟು (kannada ogatugalu) ಜನಪದ ಸಾಹಿತ್ಯದಲ್ಲಿ ಒಂದು ಮುಖ್ಯವಾದ ಪ್ರಕಾರ (ರಿಡ್ಲ್‌). ಕನ್ನಡದಲ್ಲಿ ಒಡಪು, ಮುಂಡಿಗೆ ಎಂಬ ಬೇರೆ ಹೆಸರಗಳೂ ಉಂಟು. ಒಗಟು ಎಂದರೆ ಒಬ್ಬರು ಮತ್ತೊಬ್ಬರಿಗೆ ಒಡ್ಡಿದ ಸವಾಲು, ಸಮಸ್ಯೆ ಒಂದು ವಸ್ತುವನ್ನು ಮತ್ತೊಂದು ವಸ್ತುವಿನ ಮೂಲಕ  ಚಮತ್ಕಾರವಾಗಿ ವರ್ಣಿಸಿ ಆ ಅವ್ಯಕ್ತ ವಸ್ತುವನ್ನು ಕಂಡುಹಿಡಿಯುವಂತೆ ಹೇಳುವುದು ಇದರ ಕ್ರಮ. ಒಗಟಿನಲ್ಲಿ ಎರಡು ಸದೃಶವಸ್ತುಗಳಿರಬೇಕು ಒಂದು ಉಪಮಾನ, ಮತ್ತೊಂದು ಉಪಮೇಯ. ಇಲ್ಲಿ ಉಪಮಾನ ವಾಚ್ಯವಾಗಿರುತ್ತದೆ; ಉಪಮೇಯ ಅಸ್ಪಷ್ಟವಾಗಿ ರಹಸ್ಯವಾಗಿರುತ್ತದೆ. ಅದನ್ನು ಒಗಟೆಯ ಕರ್ತೃ