ಬೆಂಗಳೂರಿನ ಇತಿಹಾಸದ ಬಗ್ಗೆ ಈ ಮಾಹಿತಿ ಓದಿ.
ಬೆಂಗಳೂರಿನ ಇತಿಹಾಸದ ಬಗ್ಗೆ ಈ ಮಾಹಿತಿ ಓದಿ. ಬೆಂಗಳೂರಿನ ಮೊಳಕೆ.. ಹನ್ನೆರಡನೇ ಶತಮಾನದಲ್ಲಿ ಬಲ್ಲಾಳ ವಂಶದ ದೊರೆಗಳ ಆಳ್ವಿಕೆಯ ಕಾಲದಲ್ಲಿ “ಚಿಕ್ಕ ಬಲ್ಲಾಳಪುರ”, “ದೊಡ್ಡ ಬಲ್ಲಾಳಪುರ” ಮತ್ತು “ಈಚೆ ಪಕ್ಕನಾಡು” ಪ್ರಮುಖವಾದ ಸಂಸ್ಥಾನಗಳು. ಅವುಗಳು ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಮತ್ತು ಯಲಹಂಕವಾಗಿ ಪರಿವರ್ತನೆಗೊಳ್ಳುವಷ್ಟರಲ್ಲಿ ವಿಜಯನಗರ ಸಾಮ್ರಾಜ್ಯದಲ್ಲಿ ಕೃಷ್ಣದೇವರಾಯರ ಅಧಿಕಾರ ಪ್ರಾರಂಭವಾಗಿತ್ತು. ಕೆಂಪೇಗೌಡರ ವಂಶಸ್ಥರು ವಿಜಯನಗರದ ಸಾಮ್ರಾಜ್ಯದ ಸಾಮಂತರಾಗಿ ಈ ನಾಡಿನ ‘ನಾಡಪ್ರಭುಗಳಾಗಿ’ ಆಡಳಿತ ನಡೆಸುತ್ತಿದ್ದರು. ಕೆಂಪನಂಜೇಗೌಡರು ಆ ಸಮಯದ ಯಲಹಂಕದ ನಾಡಪ್ರಭುಗಳಾಗಿದ್ದರು. ಇವರ ಮಗನೇ ಕೆಂಪೇಗೌಡ. ಕೆಂಪೇಗೌಡರು ಚಿಕ್ಕಂದಿನಿಂದಲೇ …