Kannada Gadematu : ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ

ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ

ಊಟ ಬಲ್ಲವನಿಗೆ ರೋಗವಿಲ್ಲಮಾತು ಬಲ್ಲವನಿಗೆ ಜಗಳವಿಲ್ಲ

Kannada Gadematu : ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ ಗಾದೆಯು ವೇದಕ್ಕೆ ಸಮಾನ. ವೇದ ಸುಳ್ಳಾದರು ಗಾದೆ ಸುಳ್ಳಾಗದು. ಗಾದೆಯು ಹಿರಿಯರ ಜೀವನದ ಅನುಭವದ ನುಡಿಮುತ್ತುಗಳು.

ಈ ಗಾದೆಯು ಮಾತಿನ ಮಹತ್ವವನ್ನು ಹಾಗೂ ಆಹಾರದ ಇತಿಮಿತಿಗಳನ್ನು ತಿಳಿಸುತ್ತದೆ. ಸಮಯಕ್ಕೆ ಸರಿಯಾಗಿ ಹಿತಮಿತವಾಗಿ ಒಳ್ಳೆಯ ಆಹಾರವನ್ನು ಸೇವಿಸಿದರೆ ನಾವು ಆರೋಗ್ಯವಂತರಾಗಿ ಬದುಕಬಹುದು. ಅದೇ ರೀತಿ ನಾವು ಆಡುವ ಮಾತು ನಯ ವಿನಯದಿಂದ ಕೂಡಿರಬೇಕು. ಯಾವುದೇ ವಿಷಯವಾದರೂ ಅದನ್ನು ಅರಿತು ಮಾತನಾಡಬೇಕು.

ನಮ್ಮ ಆರೋಗ್ಯಕ್ಕೆ ಯಾವುದು ಪಥ್ಯ ಹಾಗೂ ಯಾವುದು ಅಪಥ್ಯ ಎಂದು ತಿಳಿದು ಉಣ್ಣಬೇಕು. ಹೊಟ್ಟೆ ತುಂಬಿದರೆ ಸಾಕೆಂದು ತಿಂದರೆ ಆರೋಗ್ಯ ಹದಗೆಡುತ್ತದೆ. ಅದೇ ರೀತಿ ಮಾತು ಕೂಡ. ಮಾತೇ ಮುತ್ತು ಮಾತೇ ಮೃತ್ಯು ಎಂದು ಹಿರಿಯರು ಹೇಳಿದ್ದಾರೆ. ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎಂಬ ಮಾತೂ ಇದೆ. ಮಾತನಾಡುವ ಮೊದಲು ಜಾಗ್ರತೆವಹಿಸಬೇಕು. ಮಾತಿಗೆ ಮಾತು ಬೆಳೆದರೆ ಅದು ಜಗಳಕ್ಕೆ ಕಾರಣವಾಗುತ್ತದೆ. ಒಟ್ಟಿನಲ್ಲಿ ಮಾಡುವ ಊಟ ಹಾಗೂ ಆಡುವ ಮಾತು ಎರಡು ಹಿತಮಿತವಾಗಿದ್ದರೆ ಕ್ಷೇಮ ಎಂಬುದು ಈ ಗಾದೆಯ ತಾತ್ಪರ್ಯವಾಗಿದೆ.

10 gadegalu in kannada

Leave a Comment